Thursday 1 February 2018

ನಮ್ಮ ಹೆಮ್ಮೆಯ SS STF DIGITAL GROUP



ನಮ್ಮ ಹೆಮ್ಮೆಯ
SS STF DIGITAL GROUP
ಜಗತ್ತು ತಂತ್ರಜ್ಞಾನದ ಬೆನ್ನು ಹತ್ತಿದೆ. ತಂತ್ರಜ್ಞಾನ ಬಳಕೆಯಿಲ್ಲದ ಜೀವನ ಊಹಿಸುವುದು ಅಸಾಧ್ಯವೇ ಸರಿ. ವೈಯಕ್ತಿಕ ಜೀವನದಲ್ಲಿ ಹಾಸುಹೊಕ್ಕಾಗಿರುವ ಈ ತಂತ್ರಜ್ಞಾನವನ್ನು ನಮ್ಮ ವೃತ್ತಿ ಬದುಕಿನಲ್ಲಿ ಬಳಸಿಕೊಳ್ಳಬೇಕಾಗಿರುವುದು ಇಂದು ಅತ್ಯನಿವಾರ್ಯವಾಗಿದೆ. ಈ ಹಿನ್ನಲೆಯಲ್ಲಿ ನಮ್ಮ ಸಮಾಜ ವಿಜ್ಞಾನದ ಅನುಕೂಲಿಸುವ ವಿಧಾನ ಮತ್ತು ಮೌಲ್ಯಮಾಪನ ಪ್ರಕ್ರಿಯೆಗಳಿಗೆ  ತಾಂತ್ರಿಕ ರೂಪ ನೀಡಿ ಅನುಕೂಲಿಸುವಿಕೆ ಮತ್ತು ಕಲಿಕೆಯನ್ನು ಸರಳ ಹಾಗೂ ಶಾಶ್ವತಗೊಳಿಸುವುದಕ್ಕಾಗಿ SS STF DIGITAL GROUP ರೂಪಿಸಿಕೊಳ್ಳಲಾಗಿದೆ. ಪ್ರಾರಂಭದಲ್ಲಿ ನಾಲ್ಕೈದು ಶಿಕ್ಷಕರಿಂದ ರಚನೆಗೊಂಡು ಸಂಪನ್ಮೂಲಗಳನ್ನು ತಯಾರಿಸಿ, ವಿತರಿಸಲು ಪ್ರಾರಂಭಿಸಿದ ಮೇಲೆ ಮತ್ತಷ್ಟು ಶಿಕ್ಷಕರು ಅದರಿಂದ ಪ್ರೇರಣೆಗೊಂಡು ನಮ್ಮ ತಂಡವನ್ನು ಸೇರಿಕೊಂಡರು. ಇಂದು ಕರ್ನಾಟಕದ ವಿವಿಧ ಜಿಲ್ಲೆಗಳ ಸುಮಾರು 25 ಜನ ಸಮಾನ ಮನಸ್ಕ ಸಂಪನ್ಮೂಲ ಶಿಕ್ಷಕ ಬಂಧುಗಳನ್ನು ಹೊಂದಿದ್ದೇವೆ.
ಇಲ್ಲಿಯ ಎಲ್ಲ ಸಂಪನ್ಮೂಲ ಶಿಕ್ಷಕ ಬಂಧುಗಳು ಹಗಲಿರುಳೆನ್ನದೆ 8, 9 ಮತ್ತು 10 ನೇ ತರಗತಿಗಳ ಸಮಾಜ ವಿಜ್ಞಾನದ ಎಲ್ಲ ಅಧ್ಯಾಯಗಳ ಪಿಪಿಟಿ, ರಸಪ್ರಶ್ನೆ ಪಿಪಿಟಿ, ವಿಡಿಯೋ ನೋಟ್ಸ್ ಗಳು, ಪ್ರಶ್ನೋತ್ತರಗಳು, ಪಾಸಿಂಗ್ ಪ್ಯಾಕೇಜ್ ಗಳು, ನೀಲನಕಾಶೆಯೊಂದಿಗೆ ಪ್ರಶ್ನೆಪತ್ರಿಕೆಗಳು, ಅನುಕೂಲಕಾರರು ನಿರ್ವಹಿಸಬೇಕಾದ ದಾಖಲೆಗಳನ್ನು ಕನ್ನಡ ಹಾಗೂ ಇಂಗ್ಲಿಷ್ ಮಾಧ್ಯಮಗಳೆರಡರಲ್ಲೂ  ತಮಗೆ ನೀಡುತ್ತಲಿದ್ದೇವೆ. ಇಲ್ಲಿ ಮುಖ್ಯವಾಗಿ ಗಮನಿಸಬೇಕಾದ ಅಂಶವೆಂದರೆ ನಾವುಗಳು ತಯಾರಿಸಿರುವ ಯಾವುದೇ ಸಂಪನ್ಮೂಲಗಳು ವ್ಯವಹಾರಿಕ ದೃಷ್ಟಿಯನ್ನು ಹೊಂದಿರುವುದಿಲ್ಲ. ಅಂದರೆ ಇಲ್ಲಿ ಯಾವುದೇ ಹಣಕಾಸಿನ ವ್ಯವಹಾರಕ್ಕೆ ಅವಕಾಶವಿಲ್ಲ. ಎಲ್ಲವೂ ಮುಕ್ತ, ಮುಕ್ತ. ಈ ಉದ್ದೇಶಕ್ಕಾಗಿಯೇ ಎಲ್ಲರಿಗೂ ಮುಕ್ತವಾಗಿ ಹಾಗೂ ಸುಲಭವಾಗಿ ಈ ಎಲ್ಲ ಸಂಪನ್ಮೂಲಗಳು  ದೊರೆಯಲು http://socialsciencedigitalgroup.blogspot.in ಎಂಬ ಬ್ಲಾಗ್ ನ್ನು ನಿರ್ಮಿಸಿಕೊಳ್ಳಲಾಗಿದೆ. ಈ ಬ್ಲಾಗ್ ನಿಂದ  ತಮಗೆ ಬೇಕಾದ ಸಂಪನ್ಮೂಲಗಳನ್ನು ಪಡೆದುಕೊಳ್ಳಬಹುದಾಗಿದೆ.
ಈ ಸಂಪನ್ಮೂಲಗಳು ಸಕಾಲಿಕವಾಗಿ ಹಾಗೂ ಗುಣಾತ್ಮಕವಾಗಿ ದೊರೆಯುವಂತಾಗಲು ನಾವುಗಳು ನಮ್ಮದೇ ಆದ ಖರ್ಚುವೆಚ್ಚಗಳಲ್ಲಿ ವರ್ಷದಲ್ಲಿ ಒಂದೆರೆಡು ಬಾರಿ ಕಾರ್ಯಾಗಾರಗಳನ್ನು ಮಾಡುತ್ತೇವೆ. ಆ ಕಾರ್ಯಾಗಾರಗಳಲ್ಲಿ ಮುಂದೆ ರಚಿಸಬೇಕಾಗಿರುವ ಸಂಪನ್ಮೂಲಗಳು, ಅವುಗಳ ಸ್ವರೂಪ ಮುಂತಾದವುಗಳ ಬಗ್ಗೆ ಸುದೀರ್ಘವಾಗಿ ಚರ್ಚಿಸಿ ಕಾರ್ಯ ಹಂಚಿಕೆ ಮಾಡಿಕೊಳ್ಳುತ್ತೇವೆ.
ನಮ್ಮ ತಂಡದ ಸದಸ್ಯರು ಬೇರೆ ಬೇರೆ ಜಿಲ್ಲೆಗಳಲ್ಲೂ ಸಂಪನ್ಮೂಲ ವ್ಯಕ್ತಿಗಳಾಗಿ ಕಾರ್ಯ ನಿರ್ವಹಿಸಿ ಅವರೆಲ್ಲರ ಪ್ರಶಂಸೆಗೆ ಪಾತ್ರರಾಗಿದ್ದಾರೆ. ಇತ್ತೀಚೆಗೆ ತೀರ್ಥಹಳ್ಳಿ ತಾಲ್ಲೂಕಿನಲ್ಲಿ ತಾಲ್ಲೂಕು ಮಟ್ಟದ ಡಿಜಿಟಲ್ ಆಧಾರಿತ ರಸಪ್ರಶ್ನೆ ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸಿಕೊಟ್ಟದ್ದು ಒಂದು ಖುಷಿಯ ವಿಷಯವಾಗಿದೆ. ಜೊತೆಗೆ ನಮ್ಮ ತಂಡವು PUBLIC TV ಕಾರ್ಯಕ್ರಮ “Public Hero”  ಆಗಿ ಗುರುತಿಸಲ್ಪಟ್ಟಿದೆ ಎಂಬುದನ್ನು ತಿಳಿಸಲು ಅತೀವ ಸಂತೋಷ ಎನಿಸುತ್ತದೆ.
ನಮ್ಮ ಈ ಡಿಜಿಟಲ್ ಸಂಪನ್ಮೂಲಗಳಿಂದ ಪ್ರೇರಣೆಗೊಂಡು ಬಹುತೇಕ ಶಿಕ್ಷಕ ಮಿತ್ರರು ಸ್ವಂತ ಲ್ಯಾಪಟಾಪ್ ಹೊಂದುವುದರ ಜೊತೆಗೆ ಶಾಲೆಯಲ್ಲಿ ಸಮಾಜ ವಿಜ್ಞಾನದ ಪ್ರಯೋಗಾಲಯವನ್ನು ಆರಂಭಿಸಿದ್ದಾರೆ. ಸಮುದಾಯ ಸಂಪನ್ಮೂಲಗಳನ್ನು ಈ ಉದ್ದೇಶಕ್ಕಾಗಿ ಬಳಸಿಕೊಳ್ಳಲು ಸಂಪನ್ಮೂಲ ಹಾಗೂ ಮಾರ್ಗದರ್ಶನಕ್ಕಾಗಿ ಅನೇಕರು ನಮ್ಮ ತಂಡದ ಜೊತೆಗೆ ನಿರಂತರವಾಗಿ ಸಂಪರ್ಕದಲ್ಲಿದ್ದಾರೆ. ನಮ್ಮ ರಾಜ್ಯದಲ್ಲಿ ಸಮಾಜ ವಿಜ್ಞಾನವು ಹೆಚ್ಚು ಡಿಜಿಟಲೀಕರಣ ಹೊಂದಿದ್ದು, ಬಹುತೇಕ ಶಾಲೆಗಳಲ್ಲಿ ಅದರ ಸದುಪಯೋಗವಾಗುತ್ತಿದೆ ಎಂದು ಹೇಳಲು ಹೆಮ್ಮೆ ಎನಿಸುತ್ತದೆ.

ಎಸ್.ಎಸ್.ಎಲ್.ಸಿ. ವಿಡಿಯೋ ನೋಟ್ಸ್


ಶ್ರೀ ಸಂತೋಷಕುಮಾರ. ಸಿ. ಬಳ್ಳಾರಿ ಜಿಲ್ಲೆ, ಇವರು ತಯಾರಿಸಿರುವ